ವಿಷಯಕ್ಕೆ ಹೋಗು

ಗಾಬಿ ಚುಕ್ಕೆ (ಕುರುಡು ತಾಣ ,ಬ್ಲೈಂಡ್ಸ್ಪಾಟ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾಬಿ ಚುಕ್ಕೆ (ಕುರುಡು ತಾಣ (ಬ್ಲೈಂಡ್ಸ್ಪಾಟ್)[ಬದಲಾಯಿಸಿ]

ಕಣ್ಣಿನ ದೃಷ್ಟಿಪಟಲದಲ್ಲಿ (ರೆಟಿನ) ಅದರ ಕೇಂದ್ರದಿಂದ ಸುಮಾರು ಅರ್ಥ ಮಿಮೀ. ಕೆಳಗಡೆ ಮತ್ತು 3 ಮಿಮೀ. ಒಳಕ್ಕೆ ಇರುವ ಸುಮಾರು 3 ಮಿ.ಮೀ. ವ್ಯಾಸವುಳ್ಳ ಸ್ವಲ್ಪ ಅಂಡಾಕಾರವಾಗಿರುವ ಭಾಗ ಕುರುಡುತಾಣ-(ಬ್ಲೈಂಡ್ಸ್ಟಾಟ್). ಈ ಭಾಗದಲ್ಲಿ ದೃಷ್ಟಿಪಟಲದ ಎಲ್ಲ ಕಡೆಗಳಿಂದಲೂ ನರತಂತುಗಳು ಬಂದು ಕೂಡಿಕೊಂಡು ದೃಕ್ (ಆಪ್ಟಿಕ್) ನರವಾಗುತ್ತದೆ ಮತ್ತು ಇಲ್ಲಿ ಬೆಳಕಿಗೆ ಪ್ರತಿಕ್ರಿಯೆ ತೋರಬಲ್ಲ ಜೀವಾಣುಗಳಾಗಲಿ ನರಕೋಶ ಗಳಾಗಲಿ ಇರುವುದಿಲ್ಲ. ಹೊರ ವಸ್ತುಗಳು ಈ ಸ್ಥಳದಲ್ಲಿ ಬಿಂಬವನ್ನು ಉಂಟುಮಾಡಿದರೆ ಅದು ದೃಷ್ಟಿಪಟಲದಲ್ಲಿ ಯಾವ ಪ್ರತಿಕ್ರಿಯೆಯನ್ನೂ ಉಂಟುಮಾಡುವುದಿಲ್ಲ ಮತ್ತು ಸಹಜವಾಗಿ ಆ ವಸ್ತು ದೃಷ್ಟಿಗೋಚರಕ್ಕೆ ಬರಲಾರದು. ಆದರೆ ಎರಡು ಕಣ್ಣುಗಳ ಕುರುಡುತಾಣಗಳು ಪರಸ್ಪರ ಸಮಾನ ಸ್ಧಳಗಳಲ್ಲಿ ಇಲ್ಲದಿರುವುದರಿಂದ ವಸ್ತು ಇನ್ನೊಂದು ಕಣ್ಣಿನಲ್ಲಿ ಪ್ರತಿಬಿಂಬ ವನ್ನು ಬೇರೆ ಸ್ಧಳದಲ್ಲಿ ಉಂಟುಮಾಡಿ ಆ ಕಣ್ಣಿನ ಮೂಲಕ ದೃಷ್ಟಿಗೋಚರಕ್ಕೆ ಬರುತ್ತದೆ. ಈ ಕಾರಣದಿಂದ ಸಾಮಾನ್ಯವಾಗಿ ಎರಡು ಕಣ್ಣುಗಳ ಏಕಕಾಲಿಕ ದೃಷ್ಟಿ ಲಾಭವುಳ್ಳವರಲ್ಲಿ ಕುರುಡುತಾಣದಿಂದ ಯಾವ ಅನನುಕೂಲತೆಯೂ ಇರುವುದಿಲ್ಲ. ಕಾರಣಾಂತರದಿಂದ ವ್ಯಕ್ತಿಯಲ್ಲಿ ಒಂದು ಕಣ್ಣಿನಲ್ಲಿ ಮಾತ್ರ ದೃಷ್ಟಿ ��ದ್ದರೆ ಆಗ ವಸ್ತುಗಳು ಒಂದೊಂದು ಸಲ ಕಾಣಿಸಿದೆ ಇರುವ ಸಾಧ್ಯತೆ ಉಂಟು. ಆದರೆ ದೃಷ್ಟಿಸುವಾಗ ಕಣ್ಣು ಯಾವಾಗಲೂ ಸ್ವಲ್ಪ ಚಲಿಸುತ್ತಲೇ ಇರುವುದರಿಂದ ಇದೂ ಗಮನಕ್ಕೆ ಬರುವುದಿಲ್ಲ.